ಓಂ ಶ್ರೀ ಸಾಯಿರಾಂ

ಭಗವಂತನ ಈ ಸೃಷ್ಟಿಯಲ್ಲಿ ಮಾನವನ ಜನ್ಮ ತುಂಬಾ ಸರ್ವ ಶ್ರೇಷ್ಠವಾದ ಜನ್ಮ ಇಡೀ ಭೂಮಂಡಲದಲ್ಲಿ ಭಗವಂತನ ಪ್ರೀತಿ ಪಾತ್ರವಾಗಲು ಲಭಿಸದಂತಹ ಒಂದು ಅತ್ಯದ್ಭುತವಾದ ಅವಕಾಶವನ್ನು ಭಗವಂತ ಈ ಮಾನವ ಪ್ರಾಣಿಗೆ ಮಾಡಿಕೊಟ್ಟಿದ್ದಾರೆ.

ಆದರೆ

ನಾವು ಯಾವ ಉದ್ದೇಶದಿಂದ ಈ ಸೃಷ್ಟಿಯಲ್ಲಿ ಮಾನವರಾಗಿ ಜನಿಸಿದ್ದೇವೆ“ ಎಂಬ ಸಣ್ಣ ಪ್ರಶ್ನೆಯು ಕೂಡ ನಮ್ಮ ಆಲೋಚನೆಗೆ ಬರದೆ ತನ್ನ ಇಷ್ಟಾನುಸಾರ ಕ್ರಮಿಸುತ್ತ ಕ್ಷಣ ಕ್ಷಣ ಭಗವಂತನಿಂದ ದೂರವಾಗುತ್ತಿದ್ದಾನೆ. ಹರಿಷಡ್ವರ್ಗಗಳನ್ನು ಗೆಲ್ಲುವುದಿರಲಿ ಹತೋಟಿಯಲ್ಲಿಟ್ಟು ಕೊಳ್ಳಲಾಗದೆ ಧರ್ಮವನ್ನು ಮರೆತು ಅಧರ್ಮದ ಆದಿ ಹಿಡಿದು ಅವನತಿಯ ಕಡೆಗೆ ಮುಖ ಮಾಡಿ ಸಾಗುತ್ತಿರುವುದು ಶೋಚನೀಯ ಸಂಗತಿ. ಸಾಕ್ಷಾತ್ ಭಗವಂತನೇ ತನ್ನನ್ನು ತಾನು ಪೂಜಿಸಿಕೊಳ್ಳಲು ಭಗವಂತನ ದಿವ್ಯಸ್ವರೂಪಿಗಳನ್ನಾಗಿ ನಮ್ಮನ್ನು ಸೃಷ್ಟಿಸಿದ್ದರು ಸೃಷ್ಟಿಸಿದ ಸೃಷ್ಟಿಕರ್ತ ಸೃಷ್ಟಿಯಲ್ಲಿ ಇಲ್ಲವೆಂಬಂತೆ ಗರ್ವದಿಂದ ನಡೆದುಕೊಳ್ಳಲು ಮುಖ್ಯ ಕಾರಣವೇ ಮಾನವನ ಅಜ್ಞಾನ. ಮಾನವ ಜ್ಞಾನದ ಅಭಾವದಿಂದ ತನಗೆ ತಾನೇ ಶಿಕ್ಷೆ ಕೊಟ್ಟುಕೊಳ್ಳುತಿರುವ ಮಿತಿಯನ್ನು ಗಮನಿಸಿದರೆ ಇದು ಮಾನವನ ಅಧರ್ಮದ ಪರಮಾವಧಿ ಎಂಬಹುದರಲ್ಲಿ ಸಂಶಯವಿಲ್ಲ. ಈ ನಮ್ಮ ಧರ್ಮ ಭೂಮಿ ಭಾರತದಲ್ಲಿ

ಸಮಸ್ಯೆ ಇರದ ಜಿಲ್ಲೆ ಇಲ್ಲ………….
ಸಮಸ್ಯೆ ಇರದ ಗ್ರಾಮವಿಲ್ಲ…………
ಸಮಸ್ಯೆ ಇರದ ಮನೆ ಇಲ್ಲ…………..
ಸಮಸ್ಯೆ ಇರದ ಜೀವಿಯೇ ಇಲ್ಲ ಹಾಗೂ
ಪ್ರತಿಯೊಬ್ಬರಿಗೂ ಸಮಸ್ಯೆ ಸಮಸ್ಯೆ ಸಮಸ್ಯೆ………………………….
ತಂದೆಯಿಂದ,ತಾಯಿಯಿಂದ,ಮಕ್ಕಳಿಂದ,ಮೊಮ್ಮಕ್ಕಳಿಂದ,ಅಳಿಯನಿಂದ, ಸೊಸೆಯಿಂದ, ಅಕ್ಕನಿಂದ,ತಂಗಿಯಿಂದ, ಕೆಲಸಗಾರರಿಂದ,ಮಾಲೀಕರಿಂದ, ಸಹಾಯ ಮಾಡಿದವರಿಂದ, ಸಹಾಯ ಮಾಡಿಸಿಕೊಂಡವರಿಂದ ಎಲ್ಲಕ್ಕಿಂತ ಮಿಗಿಲಾಗಿ ಗರ್ಭದಲ್ಲಿರುವ ಮಗುವಿಗೂ ಸಮಸ್ಯೆ. ಹೀಗೆ ಮಾನವ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕು ತನ್ನ ಉದ್ದೇಶಗಳನ್ನೇ ಮರೆತುಹೋಗಿದ್ದಾನೆ. ಇದರ ಫಲವಾಗಿ
ಭಗವಂತ ನೀಡಿರುವ ಎಲ್ಲಾ ಸಕಲ ಸಂಪತ್ತು ಕಣ್ಣ ಮುಂದೆ ಇದ್ದರು ಅಂಧನಾಗಿ ಎಲ್ಲಾ ಇದ್ದು ಮಾನವ ಅನಾಥನಾಗಿದ್ದಾನೆ. ನಮ್ಮನ್ನು ಸೃಷ್ಟಿಸಿದ ಭಗವಂತ ಈ ಮಾನವನ ಒಳತಿಗಾಗಿ ವೇದ,ಉಪನಿಷತ್ತು, ಮಹಾಪುರಾಣ, ಉಪಪುರಾಣ,ಭಾಗವತ,ಹಾಗೂ ಎದೆಲ್ಲದರಕ್ಕಿಂತ ಮಿಗಿಲಾಗಿ ಇಡೀ ಭೂ ಮಂಡಲವಿರುವ ತನಕ ಮಾನವನ ಉದ್ಧಾರಕ್ಕಾಗಿ ಬೇಕಾಗಿರುವಸ್ಟು ಜ್ಞಾನ ಸಾಗರವನ್ನೇ ಕೊಡುವ ರಾಮಾಯಣ ಮತ್ತು ಮಹಾಭಾರತ ವನ್ನು ನೀಡಿದ್ದರು ಕೂಡ ಅದರ ಮೌಲ್ಯವನ್ನರಿಯದ ಮಾನವ ಸಾಕ್ಷಾತ್ ಭಗವಂತನ ಸೃಷ್ಟಿಯಾಗಿದ್ದರು ನೆಮ್ಮದಿ, ಶಾಂತಿ, ಸಂತೋಷ, ಪ್ರೀತಿ ಸಿಗದೇ ಅವನತಿ ಆಗುತ್ತಿರುವುದು ಮಾನವ ಕುಲಕ್ಕೆ ಅವಮಾನಕರ.

ನಾನು ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಹೊಸಕೆರೆ ಎಂಬ ಗ್ರಾಮದಿಂದ ಜನಿಸಿದ್ದು. ನನಗೆ ಬುದ್ದಿ ಬಂದಾಗಿನಿಂದ ನಾನೊಬ್ಬ ಪುಟ್ಟಪರ್ತಿಯ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ಭಕ್ತನಾಗಿದ್ದು ನನ್ನ ಚಿಕ್ಕ್ ವಯಸ್ಸಿನಲ್ಲಿ ಪದೇ ಪದೇ ಪುಟ್ಟಪರ್ತಿಯಲ್ಲಿ ಸ್ವಾಮಿ ರವರ ದರ್ಶನಕ್ಕೆ ಹೋಗುತ್ತಿದ್ದು ಅಲ್ಲಿ ಸ್ವಾಮಿರವರ ಪ್ರವಚನ ಮತ್ತು ದರ್ಶನದಿಂದ ಆಧ್ಯಾತ್ಮಿಕದ ಬಗ್ಗೆ ಅಪಾರವಾದ ಒಲವು ಮೂಡಿ ಭಗವಂತನ ಅಷ್ಟೂ ಮಹಾಕಾವ್ಯ ಮತ್ತು ಭಗವಂತನ ವಿದ್ಯೆಗಳ ಮೇಲೆ ಅಪಾರವಾದ ಪ್ರೀತಿ ಬಂದು ಅದರ ಕಲಿಕೆಗಾಗಿ ನಿರಂತರ 22 ವರ್ಷಗಳ ಸುದೀರ್ಘ ಅಭ್ಯಾಸದಿಂದ ವೇದಗಳು,ಉಪನಿಷತ್ತು, ಹಾಪುರಾಣಗಳು, ಉಪಪುರಾಣಗಳು, ಭಾಗವತ, ರಾಮಾಯಣ ಮತ್ತು ಮಹಾಭಾರತದಂತಹ ಎಲ್ಲಾ ಮಹಾಕಾವ್ಯಗಳನ್ನು ಸತತವಾಗಿ ಪಾರಾಯಣ ಮಾಡಿಕೊಂಡು ಅದರ ಮಹತ್ವದಿಂದ ಒಬ್ಬ ಮನುಷ್ಯ ದೇಶದಲ್ಲಿ ಒಳ್ಳೆಯ ಪ್ರಜೆ,ಒಳ್ಳೆಯ ತಂದೆ,ಒಳ್ಳೆಯ ತಾಯಿ,ಒಳ್ಳೆಯ ಗುರು,ಒಳ್ಳೆಯಮಗ,ಒಳ್ಳೆಯ ಮಗಳು,ಒಳ್ಳೆಯ ಸೊಸೆ,ಒಳ್ಳೆಯ ಗಂಡ,ಒಳ್ಳೆಯ ಅಣ್ಣ, ಒಳ್ಳೆಯತಮ್ಮ,ಒಳ್ಳೆಯ ಹೆಂಡತಿ, ಒಳ್ಳೆಯ ಶಿಷ್ಯ,ಒಳ್ಳೆಯ ,ಒಳ್ಳೆಯ ತಾತ,ಒಳ್ಳೆಯ ಅಜ್ಜಿ, ಒಳ್ಳೆಯ ಸ್ನೇಹಿತ,ಒಳ್ಳೆಯ ಮಾಲೀಕ, ಒಳ್ಳೆಯ ಕಾರ್ಮಿಕ ಹೀಗೆ ಎಲ್ಲಾ ತಾತ್ಕಲಿಕ ಸಂಬಂಧಕ್ಕಿಂತ ಮಿಗಿಲಾಗಿ ಒಬ್ಬ ಒಳ್ಳೆಯ ಭಕ್ತನಾಗಿ ನಿರಂತರವಾಗಿ ಭಗವಂತನ ಪಾದದಡಿಯಲ್ಲಿ ಜೀವಿಸುವುದಕ್ಕೆ ಅಗತ್ಯವಿರುವ ಜ್ಞಾನ ಸಂಪಾದನೆಯನ್ನು ರುಣಾಮಯಿಯಾದ ಭಗವಂತ ನೀಡಿರುತ್ತಾರೆ. ಅದನ್ನೇ ಅಸ್ತ್ರ ಮತ್ತು ಆಸ್ಥಿಯಾಗಿ ಇಟ್ಟುಕೊಂಡು ನಿರಂತರವಾಗಿ ಸಾವಿರಾರು ರಾಮಾಯಣ,ಮಹಾಭಾರತ ಮತ್ತು ಭಾಗವತಾಗಳ ಬಗ್ಗೆ ಪ್ರವಚನ ಮಾಡಿಕೊಂಡು ಬಂದಿರುವುದಲ್ಲದೆ ನಮ್ಮ ಜಿಲ್ಕೆಯ ಕೆಲವು ಸ್ಥಳೀಯ ಟಿವಿ ಮಾಧ್ಯಮಗಳಲ್ಲೂ ಪ್ರವಚನ ಮಾಡಲು ಭಗವಂತ ಅವಕಾಶ ಮಾಡಿಕೊಟ್ಟಿರುತ್ತಾರೆ. ಇದಲ್ಲದೆ, ಸುಮಾರು ಹತ್ತು ವರ್ಷಗಳಿಂದ
ಮಾನವನು ಪ್ರತಿನಿತ್ಯ ಅನುಭವಿಸುತ್ತಿರುವ ಗಂಡನಿಂದ,ಹೆಂಡತಿಯಿಂದ,ಮಕ್ಕಳಿಂದ, ಅತ್ತೆಮಾವನಿಂದ, ಮೊಮ್ಮಕ್ಕಳಿಂದ, ಸ್ನೇಹಿತರಿಂದ,ಸಾಂಸಾರಿಕ ಸಮಸ್ಯೆಗಳು ವಿದ್ಯಾಭ್ಯಾಸ,ಇವೆಲ್ಲಕ್ಕಿಂತ ಮುಖ್ಯವಾಗಿ ಯಾವ ವ್ಯವಹಾರವನ್ನು ಮಾಡಿದರೆ ಆತ ಜಯಶೀಲನಾಗುತ್ತಾನೆ, ರಾಜಕೀಯ,ಸಿನಿಮಾ ಹೀಗೆ ಪ್ರಪಂಚದಲ್ಲಿ ಇರುವ ಎಲ್ಲಾ ಸಮಸ್ಯೆಗಳಿಗೆ ಭಗವಂತನನ್ನು ಸುಲಭವಾಗಿ ತಲಪುವ ಮಾರ್ಗವಾದ ಮಂತ್ರೋಚ್ಚಾರಣೆ ನೀಡಿ ನಿರಂತರ ಮಂತ್ರೋಚ್ಛಾರಣೆ, ಹರಳು, ಪೂಜೆ ಮಾಡುವ ಮೂಲಕ ಶಾಶ್ವತ ಪರಿಹಾರ ಮತ್ತು ಜನರುಗಳಿಗೆ ಅವಶ್ಯವಿರುವ ಭವಿಷ್ಯದ ಎಲ್ಲಾ ಪ್ರಶ್ನೆಗಳಿಗೆ ಅಂದರೆ ವಿವಾಹ ದಾಣಿಕೆ, ವಿದ್ಯಾಭ್ಯಾಸ, ರಾಜಕೀಯ, ಸಿನೆಮಾ, ಹೀಗೆ ಎಲ್ಲಾ ಪ್ರಶ್ನೆಗಳಿಗೆ ಭಗವಾನ್ಶ್ರೀ ಸತ್ಯ ಸಾಯಿಬಾಬಾರವರೊಂದಿಗೆ ಆತ್ಮರೂಪದಲ್ಲಿ ಮಾತನಾಡಿ ನಿಖರ ಉತ್ತರ ನೀಡುವ ಶಕ್ತಿಯನ್ನು ಭಗವಂತ ನನಗೆ ನೀಡಿರುವ ಶಕ್ತಿಯಲ್ಲೊಂದು.ನನ್ನ ಈ 20 ವರ್ಷಗಳ ಆಧ್ಯಾತ್ಮಿಕ ಜೀವನದಲ್ಲಿ ನನಗೆ ಭಗವಂತ ನೀಡಿರುವ ಜ್ಞಾನ ಹಾಗೂ ಭಗವಂತನ ವಿದ್ಯೆಗಳನ್ನು ಅನುಸರಿಸಿ ಸಾವಿರಾರು ಜನಕ್ಕೆ ನನ್ನ ಕೈಲಾದ ಸೇವೆಯನ್ನು ಮಾಡಿ ಭಗವಂತನ ಕೃಪೆಗೆ ಪಾತ್ರನಾಗಬೇಕೆಂಬುದು ನನ್ನ ಮುಖ್ಯ ಉದ್ದೇಶ. ಮಾನ್ಯರುಗಳಾದ ತಾವು ತಮ್ಮ ಎಲ್ಲಾ ಸಮಸ್ಯೆಗಳು ಹಾಗೂ ಪ್ರಶ್ನೆಗಳಿಗೆ ತಮ್ಮ ಸೇವೆಗೆ ನನ್ನನ್ನು ಉಪಯೋಗಿಸಿಕೊಳ್ಳಬೇಕೆಂದು ತಮ್ಮಲ್ಲಿ ವಿನಯ ಪೂರ್ವಕವಾಗಿ ವಿನಂತಿಸಿಕೊಳ್ಳುತ್ತೆನೆ.